AiÀıÉÆÃUÁxÉ

Impact%20Stories%2022%20Treading%20a%20p

ಎದೆಗುಂದದೆ ಮುನ್ನುಗ್ಗಿದ ಹೆಜ್ಜೆಗುರುತುಗಳು

ಇವರು ಬೆಳಗಾವಿ ಜಿಲ್ಲೆಯ ಸಂಗೀತಾ ಭಿಮ್ಸಿ. ನರೇಗಾದಡಿಯಲ್ಲಿ ಕೆಲಸದ ಬೇಡಿಕೆ ಸಲ್ಲಿಸಿದ ಗ್ರಾಮದ ಮೊದಲ ಮಹಿಳೆ  ಇವರು. ಅಂದು ಅವಳು ಕಷ್ಟಗಳನ್ನೆದುರಿಸಿದರೂ, ಎದೆಗುಂದದೆ ತನ್ನ ಹಕ್ಕಿಗಾಗಿ ಹೋರಾಟ ನಡೆಸಿದಳು. ಪರಿಣಾಮವಾಗಿ ಅವರು ತಮ್ಮ ಗ್ರಾಮದಲ್ಲಿ "ದೇವಿ ದುರ್ಗಾ ಸಂಘ" ವನ್ನು ಕಟ್ಟಿ  ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡಲು ಜನರನ್ನು ಸಂಘಟಿಸಿದರು.

 

ಇಂದು, ಸಂಗೀತಾ ಭಿಮ್ಸಿ ಅವರ ಗ್ರಾಮದಲ್ಲಿ ನರೇಗಾದಡಿ 1000ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ. ಅವರು ಸತತ 7ನೇ ವರ್ಷ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದು, ಮೂರು ವರ್ಷ 100 ಮಾನವ ದಿನಗಳ ಉದ್ಯೋಗವನ್ನು  ಪೂರ್ಣಗೊಳಿಸಿದ್ದಾರೆ. ಸಂಗೀತಾ ಈಗ ಒಬ್ಬ ಕಾಯಕ ಬಂಧುವಾಗಿ 34 ಕಾರ್ಮಿಕರ ತಂಡದ  ನಿರ್ವಹಣೆ, ಕೂಲಿಕಾರರ ಹಾಜರಾತಿ, ಕೂಲಿಕಾರರಿಗೆ ಕೆಲಸ ಗುರುತಿಸುವುದು, ಕೂಲಿ ಹಣ ಪಾವತಿಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ.    

Impact%20Stories%2024%20A%20dream%20come

ನನಸಾದ ಕನಸು

ದಾವಣೆಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಕೋಗಲೂರು ಗ್ರಾಪಂ ವ್ಯಾಪ್ತಿಯ ಶೋಭಾ ಅವರಿಗೆ ಹೈನುಗಾರಿಕೆಯಲ್ಲಿ ತುಂಬ ಆಸಕ್ತಿ. ಅವರ ಬಳಿ ಎರಡು ರಾಸುಗಳಿದ್ದು ಅವುಗಳ ಆರೈಕೆಗಾಗಿ ಸಮರ್ಪಕ ಸೂರಿನ ವ್ಯವಸ್ಥೆಯಿರದೆ ಅವರು ಚಿಂತಿತರಾಗಿದ್ದರು.

ಈ ಸಂದರ್ಭದಲ್ಲಿ ಅವರಿಗೆ ಆಪದ್ಬಾಂಧವನಂತೆ ನೆರವಾಗಿದ್ದು ನರೇಗಾ ಯೋಜನೆ. ಯೋಜನೆಯಡಿ ತಮ್ಮ ರಾಸುಗಳಿಗೆ ಒಂದು ಉತ್ತಮ ಸೂರು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಸುಗಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿದಂತಾಗಿದ್ದು ಶುಚಿತ್ವವನ್ನೂ ಕಾಪಾಡಿಕೊಳ್ಳುವಂತಾಗಿದೆ. ಇದರಿಂದ ಹಾಲಿನ ಉತ್ಪಾದನೆಯೂ ಹೆಚ್ಚಾಗಿ ನರೇಗಾ ಯೋಜನೆಯು ಶೋಭಕ್ಕನ ಕನಸು ನನಸು ಮಾಡಿದಂತಾಗಿದೆ. ಅದಕ್ಕೆ ಪ್ರತಿಯಾಗಿ ಇದೀಗ ಶೋಭಕ್ಕನ ಮುಖದಲ್ಲಿ ನರೇಗಾ ಬಗ್ಗೆ ಧನ್ಯತಾ ಭಾವ ಮೂಡಿರುವುದು ಸುಳ್ಳಲ್ಲ.

MGNREGA Karnataka