PÉëÃvÀæ §zÀÄ

 ಗ್ರಾಮೀಣ ಕರ್ನಾಟಕದ ಭೂಮಿಗಳಲ್ಲಿ ಬದು ನಿರ್ಮಾಣದ ಉದ್ದೇಶದಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ  19 ಮೇ 2020 ರಿಂದ 18  ಜೂನ್ 2020ರ ವರೆಗೆ  ಬದು ನಿರ್ಮಾಣ ಅಭಿಯಾನ ಮಾಸಾಚರಣೆ  ಹಮ್ಮಿಕೊಳ್ಳಲಾಯಿತು.  ನರೇಗಾದ ಈ ಉದ್ದೇಶಿತ ಚಟುವಟಿಕೆಯನ್ನು ರೈತರು ಮಳೆಗಾಲದ ಸಮಯದಲ್ಲಿ ಅಧಿಕ ಲಾಭ ಪಡೆಯಲೆಂಬ ಸದುದ್ದೇಶದಿಂದ ವೈಯಕ್ತಿಕ ಕೃಷಿ ಭೂಮಿಗಳ ಲ್ಲಿ ಕಾರ್ಯಾಚರಣೆಯಾಗಿ ಕೈಗೆತ್ತಿಕೊಳ್ಳಲಾಯಿತು.

ಕೃಷಿ ಭೂಮಿಯಲ್ಲಿ ಮಣ್ಣಿನ ಸವಕಳಿಯನ್ನು ತಡೆಯಲು ಎತ್ತರದ ಬದುಗಳನ್ನು ನಿರ್ಮಿಸಲಾಗುತ್ತದೆ, ಇದರಿಂದ  ಭೂಮಿಯಲ್ಲಿ ತೇವಾಂಶವು ಹೆಚ್ಚಳವಾಗುದಲ್ಲದೆ ಕೃಷಿ ಭೂಮಿಗಳಲ್ಲಿ ಅಂತರ್ಜಲದ ಮಟ್ಟದಲ್ಲೂ ವೃದ್ಧಿಯಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ 100 ಮೀ. ಉದ್ದದ ಬದು ಸುಮಾರು 1.5 ಲಕ್ಷ ಲೀ. ಗಳಷ್ಟು ನೀರು ಸಂಗ್ರಹವಾಗುತ್ತದೆ.  ಈ ವಿಧಾನವು ರೈತರಿಗೆ ವರದಾನವಾಗಿ ಪರಿಣಮಿಸಿದೆ.

IMG_8543.jpg