ಕೃಷಿಹೊಂಡ

ಕರ್ನಾಟಕದ ಮಳೆಯಾಶ್ರಿತ ಪ್ರದೇಶಗಳಲ್ಲಿ ಸುರಕ್ಷಿತ ನೀರಾವರಿಗಾಗಿ ಕೃಷಿ ಹೊಂಡಗಳು ಮಳೆನೀರನ್ನು ಸಂಗ್ರಹಿಸುವುದರ ಮೂಲಕ ಜಲಮೂಲಗಳನ್ನು ಪುನಶ್ಚೇತನಗೊಳಿಸುವುದಲ್ಲದೆ ಅಂತರ್ಜಲದ ಮಟ್ಟ ಹೆಚ್ಚಿಸಿ ಬೆಳೆವಿಮೆಯಂತೆ ಪಾತ್ರನಿರ್ವಹಿಸುತ್ತವೆ. ಪ್ರತಿ ಕೃಷಿ ಹೊಂಡಗಳು ಸುಮಾರು 2 ಲಕ್ಷ ಲೀಟರ್ ಗಳಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುತ್ತದೆ.

 

2019-20ರಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕರ್ನಾಟಕದಲ್ಲಿ 30,381 ಕೃಷಿಹೊಂಡಗಳನ್ನು ನಿರ್ಮಿಸಲಾಗಿದೆ. 2020-21 ಸಾಲಿನ  ಇಲ್ಲಿಯವರೆಗೂ 10,000 ಕೃಷಿಹೊಂಡಗಳನ್ನು ನಿರ್ಮಿಸಲಾಗಿದೆ.

IMG_7490.jpg